'ಗೋಪೀ ಹಕ್ಕಿ' ( ) ಮುಖ್ಯವಾಗಿ ಪಶ್ಚಿಮ ಘಟ್ಟ, ಪೂರ್ವ ಘಟ್ಟ ಮತ್ತು ಮಧ್ಯ ಭಾರತದಲ್ಲಿ ಕಂಡು ಬರುವ ಪಕ್ಷಿ. == ವೈಜ್ಞಾನಿಕ ಹೆಸರು == ಇದು ಮುಸಿಕ್ಯಾಪಿಡೇ ಕುಟುಂಬ, ಟರ್ಡಿನೇ ಉಪಕುಟುಂಬಕ್ಕೆ ಸೇರಿದ ಪಕ್ಷಿ. ಮೈಯೋಫೋನಸ್ ಹಾರ್ಸ್‌ಫೀಲ್ಡೀ ಎಂಬುದು ಇದರ ವೈಜ್ಞಾನಿಕ ಹೆಸರು. ಸಂಸ್ಕೃತದಲ್ಲಿ ಶ್ರೀವದ ಎಂದೂ ತುಳುವಿನಲ್ಲಿ ಗೋಪೀಪೀ ಎಂದೂ ಕರಯುತ್ತಾರೆ. === ಲಕ್ಷಣಗಳು === ಗೊರವಂಕಕ್ಕಿಂತ ಸ್ವಲ್ಪ ದೊಡ್ಡ ಪಕ್ಷಿ. ಮಿರುಗುವ ಕಡು ನೀಲ ಬಣ್ಣವಿದೆ. ಕೊಕ್ಕು, ಕಾಲುಗಳು ಕಪ್ಪಗಿರುತ್ತದೆ. === ಆವಾಸ === ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ನೆಲ, ಜಲಪಾತದ ಬಳಿ, ಮರಗಳಲ್ಲಿ ವಾಸಿಸುತ್ತವೆ. ಬೇರು, ಹುಲ್ಲುಗಳಿಂದ ಕೂಡಿದ ಬಟ್ಟಲಿನಾಕಾರದ ಗೂಡು ಕಟ್ಟಿ ಮಣ್ಣಿನ ಕವಚ ರಚಿಸುತ್ತವೆ.ಹಣ್ಣು ಮತ್ತು ಕೀಟಗಳು ಈ ಹಕ್ಕಿಗಳ ಆಹಾರ. === ಸಂತಾನೋತ್ಪತ್ತಿ === ಫೆಬ್ರವರಿ-ಆಗಸ್ಟ್ ತಿಂಗಳಲ್ಲಿ ಕಂದು ಚುಕ್ಕೆಗಳಿರುವ ೩/೪ ಮೊಟ್ಟೆಗಳಿಂದ ಮರಿ ಮಾಡುತ್ತವೆ. === ಆಧಾರ === ೧. ಪಕ್ಷಿ ಪ್ರಪಂಚ: ಹರೀಶ್ ಆರ್.ಭಟ್ ಹಾಗೂ ಪ್ರಮೋದ್ ಸುಬ್ಬರಾವ್